`ಗಾಂಧಿಗಿರಿ` ಮನರಂಜನೆ ಗುರಿ
Posted date: 23 Fri, Sep 2016 – 11:01:35 AM

ಹೆಸರಾಂತ ನಿರ್ದೇಶಕ ಹಾಗೂ ನಟ ಪ್ರೇಮ್ ಹಾಗೂ ರಾಗಿಣಿ ದ್ವಿವೇದಿ ಅಭಿನಯದ ‘ಗಾಂಧಿಗಿರಿ ಸಿನಿಮಾ ಹಲವು ಮನರಂಜನಾತ್ಮಕ ವಿಷಯಗಳ ಜೊತೆಗೆ ಒಂದು ಸಂದೇಶ ಸಹ ತಿಳಿಸಿಕೊಡುವ ಚಿತ್ರ. ರಘು ಹಾಸನ್ ಅವರ ಪ್ರಥಮ ನಿರ್ದೇಶನದಲ್ಲಿ ಈ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿದಿದೆ. ಹಾಸನ ಜಿಲ್ಲೆಯ ಬೆಳಗೊಳ ಗ್ರಾಮದ ರಘು ಕಳೆದ ೧೦ ವರ್ಷಗಳಿಂದ ನಿರ್ದೇಶಕ ಪ್ರೇಮ್ ಅವರ ಜೊತೆ ಸಹಾಯಕರಾಗಿ ಅನುಭವ ಪಡೆದಿದ್ದಾರೆ. ‘ಹುಚ್ಚುಡುಗ್ರು ಸಿನಿಮಾಕ್ಕೆ ಚಿತ್ರಕಥೆ ಸಹ ರಚಿಸಿದ್ದರು. ಜನಪ್ರಿಯ ನಟಿ ಅರುಂಧತಿ ನಾಗ್ ಅವರು ತಾಯಿ ಪಾತ್ರದಲ್ಲಿ ಈಗಾಗಲೇ ೨೫ ದಿವಸ ಪಾಲ್ಗೊಂಡು ಅನೇಕ ಸನ್ನಿವೇಶಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ದ್ವಿತೀಯ ನಾಯಕಿ ಭಾವನಾ ರಾವ್. ಇಲ್ಲಿಯೂ ಸಹ ಅಮ್ಮ ಮಗನ ಅವಿನಾಭಾವ ಸಂಬಂಧ ಇದೆ. ಆದರೆ ಅಮ್ಮನ ಸಾತ್ವಿಕ ಗುಣಗಳಿಗೆ ಮಗನ ವಿರೋಧ ಸಧಿರುವ ವಿಭಿನ್ನ ಕಥೆ ಇದಂತೆ.
 ಮೊದಲ ಹಂತದಲ್ಲಿ ಚಿಕ್ಕಮಗಳೂರು, ಮೈಸೂರು, ಪಾಂಡವಪುರ ತಾಲೂಕಿನ ಚಿಕ್ಕಾಡೆ, ಅರಳಿಕೊಪ್ಪ, ನಂಜನಗೂಡು ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ನಂಜನಗೂಡಿನಲ್ಲಿ ಒಂದು ಭರ್ಜರಿ ಸಾಹಸ ಸನ್ನಿವೇಶವನ್ನೂ ಸೆರೆ ಹಿಡಿಯಲಾಗಿದೆ. ಶೇಖಡ ೪೦ ರಷ್ಟು ಚಿತ್ರೀಕರಣ ಪೂರ್ಣಗೊಳಿಸಲಾಗಿದೆ ಎಂದು ಹೇಳುವ ರಘು ಹಾಸನ್ ಅವರು ಪ್ರಜಾ ಪ್ರಭುತ್ವದಲ್ಲಿ ಹಕ್ಕಿನ ಪ್ರಕಾರ ದೊರಕದೆ ಇದ್ದರೆ ಅದನ್ನು ಕಿತ್ತುಕೊಂಡು ಪಡೆಯುವ ಪ್ರಮೇಯವ್ನನು ಈ ಚಿತ್ರದಲ್ಲಿ ಉಲ್ಲೇಖಿಸಿದ್ದಾರೆ. ರಘು ಹಾಸನ್ ಅವರೇ ಕಥೆ, ಚಿತ್ರಕಥೆ ಸಹ ಬರೆದಿದ್ದಾರೆ. ಶಾನ್ ಹಾಗೂ ಮಂಜು ಅವರ ಸಂಭಾಷಣೆ ಈ ಚಿತ್ರಕ್ಕೆ ಇದೆ.
 ಆರ್ ಜೆ ಸ್ಟುಡಿಯೋ ಅಡಿಯಲ್ಲಿ ರಾಜೇಶ್ ಪಿ ಪಾಟೀಲ್ ಅವರ ಬಹುಕೋಟಿ ನಿರ್ಮಾಣದ ‘ಗಾಂಧಿಗಿರಿ ಸಿನಿಮಾದ ಎರಡನೇ ಹಂತ ಅಕ್ಟೋಬರ್ ೧೫ ರಿಂದ ಆರಂಭಗೊಳ್ಳಲಿದೆ. ಅನೂಪ್ ಸೀಳಿನ್ ಅವರ ಸಂಗೀತಕ್ಕೆ ಡಾ ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ರಘು ಹಾಸನ್ ಅವರ ಗೀತ ರಚನೆ ಇದೆ. ಡಾ ರವಿವರ್ಮಾ ಅವರ ಸಾಹಸ ಹಾಗೂ ಹರ್ಷ ಅವರ ನೃತ್ಯ ನಿರ್ದೇಶನ ಒದಗಿಸಿದ್ದಾರೆ. ರಂಗಾಯಣ ರಘು, ಆದಿ ಲೋಕೇಶ್, ಕುರಿ ಪ್ರತಾಪ್, ನಿರಂಜನ್ ದೇಶಪಾಂಡೆ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed